ದೇ.ಹಿ.ವ.ಅ.ನಿ
ಹಿಂದುಳಿದ
ವರ್ಗಗಳ ಮಿತ್ರ
ಹಿಂದುಳಿದ ವರ್ಗಗಳ
ಅಭಿವೃದ್ಧಿಗೆ ಬದ್ಧವಾದ ಸಂಸ್ಥೆ
(1977)
dbcdc

ಚೈತನ್ಯ ಸಬ್ಸಿಡಿ ಕಂ ಸಾಫ್ಟ್ ಲೋನ್ ಯೋಜನೆ:

1) ಬ್ಯಾಂಕ್‌ಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತದೆ.
2) ಈ ಯೋಜನೆಯಲ್ಲಿ ಸರ್ಕಾರದ ಆದೇಶ ಸಂ:ಸಕಇ/165/ಬಿಎಂಎಸ್/2011 ದಿ:28/07/2011ರನ್ವಯ ಹಿಂದುಳಿದ ವರ್ಗಗಳ ಜನರಿಗೆ ಗರಿಷ್ಠ 5.00ಲಕ್ಷರೂ.ಗಳವರೆಗೆ ಆರ್ಥಿಕ ನೆರವು.
3) ಸಹಾಯಧನ ಶೇ.30ರಷ್ಟು ಅಥವ ಗರಿಷ್ಠ ರೂ.10000/-ಗಳು. ರೂ.1.00ಲಕ್ಷಕಿಂತ ಹೆಚ್ಚಿನ ಸಾಲಕ್ಕೆ ಸಹಾಯಧನ ಲಭ್ಯವಿಲ್ಲ.
4) ನಿಗಮದಿಂದ ಮಾರ್ಜಿನ್ ಹಣ ಶೇ.20ರಷ್ಟು, ಅಥವ ಗರಿಷ್ಠ ರೂ.1.00ಲಕ್ಷಗಳು.
5) ಮಾರ್ಜಿನ್ ಹಣಕ್ಕೆ ವಾರ್ಷಿಕ ಶೇ.4ರ ಬಡ್ಡಿದರ.
bdcdc
6) ಉಳಿಕೆ ಮೊತ್ತ ಬ್ಯಾಂಕ್ ಪಾಲಿನ ಸಾಲ.
7) ಸಾಲದ ಉದ್ದೇಶ ಕೃಷಿ‌ಅವಲಂಬಿತ ಚಟುವಟಿಕೆಗಳು, ವ್ಯಾಪಾರ, ಸೇವಾವಲಯ ಮತ್ತು ಸಾರಿಗೆವಲಯದ ಉದ್ದೇಶಗಳು.
8) ಮಾರ್ಜಿನ್ ಹಣದ ಸಾಲದ ಮರುಪಾವತಿ ಬ್ಯಾಂಕ್ ನಿಗದಿಪಡಿಸಿದ ಕಂತುಗಳನ್ವಯ.
9) ಆಯಾ ಬ್ಯಾಂಕ್ ಶಾಖೆಗೆ ನಿಗಧಿಪಡಿಸಿದ ಗುರಿಗೆ 1:3 ಅನುಪಾತದಲ್ಲಿ ಅರ್ಜಿ ಶಿಫಾರಸ್ಸು ಮಾಡುವುದು.
10) ರೂ.35,000/-ಹೆಚ್ಚಿನ ಮಾರ್ಜಿನ್ ಹಣಕ್ಕೆ ಬ್ಯಾಂಕ್‌ಗಳಿಂದ ಮಾರ್ಜಿನ್ ಹಣ ಸಾಲ ಮರುಪಾವತಿಯಗುವವರೆಗೆ ಬ್ಯಾಂಕಿನ ಭದ್ರತಾ ಪತ್ರಗಳನ್ನು ಬಿಡುಗಡೆ ಮಾಡುವುದಿಲ್ಲವೆಂದು ಪತ್ರ ಪಡೆದು ಮಾರ್ಜಿನ್ ಹಣ ಮಂಜೂರು ಮಾಡುವುದು.
ಸಾಲ ಪಡೆಯಲು ಅರ್ಹತೆಗಳು:-
1. ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
2. ಹಿಂದುಳಿದ ವರ್ಗಗಳ ಪ್ರವರ್ಗ-1,2A, 3A, ಮತ್ತು 3B ಗೆ ಸೇರಿರಬೇಕು
3. ವಯಸ್ಸು-18ರಿಂದ 55 ವರ್ಷಗಳ ಮಿತಿಯಲ್ಲಿರಬೇಕು.
4. ಈಗಾಗಲೇ ಬೇರೆ ಹಣಕಾಸು ಸಂಸ್ಥೆಯಿಂದ ಸಾಲ ಪಡೆದು ಸುಸ್ಥಿದಾರರಾಗಿರಬಾರದು.
5. ಸಾಲ ಬಯಸುವ ಉದ್ದೇಶದ ಅನುಭವ/ಪರಿಜ್ಞಾನ ಹೊಂದಿರಬೇಕು.
6. ಅರ್ಜಿದಾರರು ತಮ್ಮ ಸೇವಾ ವಲಯದ ವ್ಯಾಪ್ತಿಯಲ್ಲಿ ಇರುವ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು.
ಆಯ್ಕೆ ಮತ್ತ್ತು ಮಂಜೂರಾತಿ ವಿಧಾನ :-
ಸರ್ಕಾರದ ಆದೇಶ ಸಂಖ್ಯೆ:ಸಕ‌ಇ/221/ಬಿಸಿ‌ಎ/2008, ದಿನಾಂಕ:02/01/2009ರ ಮೇರೆಗೆ ವಿಧಾನ ಸಭಾ ಸದಸ್ಯರ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಕ್ಷೇತ್ರಕ್ಕೆ ನಿಗಧಿಪಡಿಸಿದ ಆರ್ಥಿಕ ಹಾಗೂ ಭೌತಿಕ ಗುರಿಗನುಗುಣವಾಗಿ ವಿವಿಧ ಹಿಂದುಳಿದ ವರ್ಗಗಳ ಮೀಸಲಾತಿ ಹಾಗೂ ಮಹಿಳಾ ಮತ್ತು ಅಂಗವಿಕಲರ ಮೀಸಲಾತಿ ಮೆರೆಗೆ ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ.

      « ಹಿಂಬದಿ